KSLU Logo


One moment ...
ಹಿಂದಿನ ಪುಟ

ಶ್ರೀ ಸುನಿಲ್ ಎನ್. ಬಾಗಡೆ

ಶ್ರೀ ಸುನಿಲ್ ಎನ್. ಬಾಗಡೆ, ಸಹಾಯಕ ಪ್ರಾಧ್ಯಾಪಕರು, ಕ.ರಾ.ಕಾ.ವಿ. ಕಾನೂನು ಶಾಲೆ ಇವರು ಐದು ವರ್ಷದ ಬಿ.ಎ., ಎಲ್.ಎಲ್.ಬಿ., (ಆನರ್ಸ್) ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ 2008 ನೇ ಇಸವಿಯಲ್ಲ್ಲಿ ಪಡೆದಿರುತ್ತಾರೆ. 2010 ನೇ ಇಸವಿಯಲ್ಲಿ ಕಾನೂನು ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ  ಕಾನೂನು ಸ್ನಾತಕೋತ್ತರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ವಾಣಿಜ್ಯ ಮತ್ತು ವ್ಯವಹಾರ ಕಾನೂನುಗಳಲ್ಲಿ ಪ್ರಾವಿಣ್ಯತೆಯನ್ನು ಹೊಂದಿರುತ್ತಾರೆ. ಸದರಿಯವರು ಅಪಕೃತ್ಯ ಕಾನೂನು ವಿಷಯದಲ್ಲಿ ಸ್ವರ್ಣ ಪದಕವನ್ನು ಪಡೆದಿರುತ್ತಾರೆ. ಹಾಗೂ ಕಾನೂನು ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ತೃತಿಯ ಸ್ಥಾನವನ್ನು ಪಡೆದಿರುತ್ತಾರೆ. ಸದರಿಯವರು 2012 ರಲ್ಲಿ ರಾಷ್ಟೀಯ ಅರ್ಹತಾ ಪರಿಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. 
ಸದರಿಯವರು ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುತ್ತಿರುವಾಗ ರ್ಯಾಂಗಲರ್ ಡಾ. ಡಿ. ಸಿ. ಪಾವಟೆ ಡೈಮಂಡ ಜುಬಲಿ ಸೆಲಿಬ್ರೆಶನ್ ಶಿಷ್ಯವೇತನ ಮತ್ತು ಪ್ರೊ. ವಿ. ಆರ್. ಭಟ್ ದತ್ತಿ ಶಿಷ್ಯ ವೇತನವನ್ನು ಪಡೆದಿರುತ್ತಾರೆ. ಪದವಿ ಮತ್ತು ಸ್ನಾತಕೋತ್ತರ ಕೊರ್ಸ ವ್ಯಾಸಂಗ ಮಾಡುತ್ತಿರುವಾಗ ಹಲವು ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ಈ ಸ್ಪರ್ಧೆಗಳಲ್ಲಿ ಅತ್ಯುತ್ತಮ ಲಿಖಿತ ವಾದ ಪತ್ರ, ದ್ವಿತೀಯ ಸ್ಥಾನ ಹಾಗೂ ವಿಜೇತರಾಗಿ ಹೊರಹೊಮ್ಮಿರುತ್ತಾರೆ. ಅಷ್ಟೇ ಅಲ್ಲದೆ, ಸದರಿಯವರು ವಿವಿಧ ನಿಬಂಧ ಸ್ಪರ್ಧೆಗಳು ಹಾಗೂ ಸಂಶೋಧನಾ ಲೇಖನ ಬರವಣಿಗೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಂಚಿನ ಪದಕ ಹಾಗೂ ತೃತಿಯ ಸ್ಥಾನವನ್ನು ಪಡೆದಿರುತ್ತಾರೆ. ಸದರಿಯವರು ವಿವಿಧ ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿ ಲೇಖನಗಳನ್ನು ಮಂಡಿಸಿರುತ್ತಾರೆ. ಸದರಿಯವರ ಲೇಖನಗಳು ಸಂಪಾದಿತ ಪುಸ್ತಕಗಳಲ್ಲಿ ಪ್ರಕಟಗೊಂಡಿರುತ್ತವೆ. ಸದರಿಯವರು ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ, ಧಾರವಾಡದಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸಿರುತ್ತಾರೆ.

 

Back To Top