KSLU Logo


One moment ...
ಹಿಂದಿನ ಪುಟ

ಶ್ರೀ. ಖಾಲಿದ ಬಿ. ಖಾನ

     ಶ್ರೀ. ಖಾಲಿದ ಬಿ. ಖಾನ, ಎಮ್.ಪಿ.ಎಡಿ., ಎಮ್ .ಫಿಲ್., ಎನ್.ಐ.ಎಸ್. (ಪಿಎಚ್.ಡಿ) ಅವರು ಎನ್.ಐ.ಎಸ್. (ವಾಲಿಬಾಲ್) 2002ರಲ್ಲಿ ಪ್ರಥಮ ಶ್ರೇಣಿ ಮತ್ತು ಎಮ್.ಪಿ.ಎಡಿ. ನಲ್ಲಿ 3 ನೇ ಶ್ರೇಣಿ ಪಡೆದರು, ಅವರು ತಮ್ಮ ವೃತ್ತಿಜೀವನವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಅತಿಥಿ ಉಪನ್ಯಾಸಕರಾಗಿ ಪ್ರಾರಂಭಿಸಿದರು, ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ವಾಲಿಬಾಲ್ ಕೋಚ್ ಆಗಿ ಕೆಲಸ ಮಾಡಿದರು. 2008 ರಿಂದ 2010 ರವರೆಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಬೋಧನಾ ಸಹಾಯಕರಾಗಿ ಕೆಲಸ ಮಾಡಿದರು. 2002ರಲ್ಲಿ ನಡೆದ 31 ನೇ ಜೂನಿಯರ್ ನ್ಯಾಷನಲ್ ಪಂದ್ಯಾವಳಿಗೆ ಕರ್ನಾಟಕ ವಾಲಿಬಾಲ್ ಮೆನ್ ಟೀಮ್‍ಗೆ ಮುಖ್ಯ ಕೋಚ್ ಆಗಿ ನೇಮಕಗೊಂಡರು ಮತ್ತು ವಾಲಿಬಾಲ್, ಹ್ಯಾಂಡ್ಬಾಲ್ ಮತ್ತು ನೆಟ್ಬಾಲ್‍ಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡರು. ವಾಲಿಬಾಲ್‍ನಲ್ಲಿ ಏಸ್ ಆಕ್ರಮಣಕಾರರಾಗಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಜೂನಿಯರ್ ನ್ಯಾಷನಲ್ಸ್ ಪ್ರತಿನಿಧಿಸಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Back To Top