KSLU Logo


One moment ...
ಹಿಂದಿನ ಪುಟ

ಡಾ. ರಾಜೇಂದ್ರಕುಮಾರ ಹಿಟ್ಟಣಗಿ

ಡಾ. ರಾಜೇಂದ್ರಕುಮಾರ ಹಿಟ್ಟಣಗಿ, ಸಹಾಯಕ ಪ್ರಾಧ್ಯಾಪಕರು, ಕ.ರಾ.ಕಾ.ವಿ. ಕಾನೂನು ಶಾಲೆ, ಇವರು ಕಾನೂನು ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ. ಕಾರ್ಮಿಕ ಕಾನೂನು ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿಯನ್ನು ಮತ್ತು ಪಿಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ಇವರು ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಗದಗ ಮತ್ತು ಬೆಳಗಾವಿಯಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕರಾಗಿ ಸರ್ಕಾರಿ ಕಾನೂನು ಮಹಾವಿದ್ಯಾಲಯ ಹಾಸನ ಮತ್ತು ಪ್ರತಿಷ್ಠಿತ ಗುಜರಾತ ರಾಷ್ಟ್ರೀಯ ಕಾನೂನು ಶಾಲೆ, ಗಾಂಧಿನಗರದಲ್ಲಿಯೂ ಸೇವೆ ಸಲ್ಲಿಸಿರುತ್ತಾರೆ. ಇವರು ದೀನದಯಾಲ ಪೆಟ್ರೋಲಿಯಮ್ ತಾಂತ್ರಿಕ ಮಹಾವಿದ್ಯಾಲಯ, ಗುಜರಾತನಲ್ಲಿಯೂ ಭೊದನೆ ಮಾಡಿದ್ದಾರೆ. ಗುಜರಾತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪ್ರಥಮ ಅಂತರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಸಂಶೋಧನಾ ಲೇಖನಗಳನ್ನು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿಚಾರ ಸಂಕೀರಣಗಳಲ್ಲಿ ಮಂಡಿಸಿದ್ದಾರೆ. ಇವರ ಲೇಖನಗಳು ಕಾನೂನು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಅಖಿಲ ಭಾರತ ಕಾನೂನು ಶಿಕ್ಷಕರ ಸಂಘ, ನವದೆಹಲಿಯ ಸದಸ್ಯರಾಗಿದ್ದಾರೆ. ಇವರು ಕ.ರಾ.ಕಾ.ವಿ. ಯಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. 

Cell: +91 9686150110

E-mail: rajesh.hittanagi@gmail.com

Back To Top