KSLU Logo


One moment ...
ಹಿಂದಿನ ಪುಟ

ಡಾ. ಕುಮುದಾ ಎನ್. ಕರೋಗಲ್

ಇವರು ತಾವು ಮಂಡಿಸಿದ “ಮುಲ್ಕರಾಜ ಆನಂದ ಅವರ ಕೃತಿಗಳಲ್ಲಿ ಹೆಣ್ಣುಮಕ್ಕಳ ಪಾತ್ರಗಳು: ಒಂದು ಅಧ್ಯಯನ” ಎಂಬ ಪ್ರಬಂಧವನ್ನು ಮಂಡಿಸಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರವರು ಡಾಕ್ಟರೇಟ ಪದವಿಯನ್ನು ಸನ್ ಮೇ ತಿಂಗಳ 2011ರಲ್ಲಿ ಕೊಟ್ಟಿರುತ್ತಾರೆ. ವಿನಾಯಕ ಮಿಶನ್ಸ ವಿಶ್ವವಿದ್ಯಾಲಯ ತಮಿಳನಾಡಿನಿಂದ ಎಂ.ಫಿಲ್. ಪದವಿ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಹೊಂದಿರುತ್ತಾರೆ. ಇವರು ಇಂಗ್ಲೀಷ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸನ್ 1989ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಇವರು ಸುಮಾರು 18 ವರ್ಷಗಳ ಪಾಠ ಮಾಡುವ ಅನುಭವವನ್ನು ಹೊಂದಿರುತ್ತಾರೆ ಇವರು ಅನೇಕ ರಾಜ್ಯ, ದೇಶ, ಹಾಗೂ ಅಂತರಾಷ್ಟ್ರೀಯ ಮಟ್ಟದ ಕಮ್ಮಟಗಳಲ್ಲಿ ಭಾಗವಹಿಸಿ ತಮ್ಮ ಪ್ರಭಂಧಗಳನ್ನು ಮಂಡಿಸಿರುತ್ತಾರೆ. ಇವರು ಸಧ್ಯಕ್ಕೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Back To Top