KSLU Logo


One moment ...

ದೈಹಿಕ ಶಿಕ್ಷಣ ನಿರ್ದೇಶಕರು

ಡಾ. ಖಾಲೀದ ಖಾನ (ಎಮ್.ಪಿ.ಎಡ್.,) (ಎಮ್.ಪಿ.ಎಲ್.,)ಎನ್.ಐ.ಎಸ್.,ಪಿ.ಎಚ್.ಡಿ ರವರು ಶ್ರೀ. ಗಜಾನನ ಪ್ರಭುರವರಮಾರ್ಗದರ್ಶನದಲ್ಲಿ ಮಂಡಿಸಲಾದ “ A Study on Proprioception and Balance ability in sports persons belonging to indigenous and Non- indigenous sports” ಪ್ರಬಂದಕ್ಕೆ ಶಿವಮೊಗ್ಗ ವಿಶ್ವವಿದ್ಯಾಲಯವು ಸನ್೨೦೧೮ನೇ ಸಾಲಿನಲ್ಲಿ ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.ಇವರ ವಿಶೇಷತೆ ಆಯ್ಕೆಯ ವಾಲೀಬಾಲನಲ್ಲಿ೨೦೦೨ರಲ್ಲಿ ಜರುಗಿದ ಎನ್.ಐ.ಎಸ್.ಪರಿಕ್ಷೆಯಲ್ಲಿ ಮೊದಲನೆ ಶ್ರೇಣಿಯಲ್ಲಿ ಮತ್ತು ಎಮ್. ಪಿ.ಎಡ್ ನಲ್ಲಿ ೩ನೇ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ. ಶ್ರೀಯುತರು ತಮ್ಮ ವೃತ್ತಿ ಜಿವನವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿಅತಿಥಿ ಉಪನ್ಯಾಸಕರಾಗಿ ಪ್ರಾರಂಬಿಸಿ ೨೦೦೮ ರಿಂದ ೨೦೧೦ರ ವರೆಗೆ ಬೋಧನಾ ಸಹಾಯಕರಾಗಿಯು ಕೆಲಸವನ್ನುಮಾಡಿರುತ್ತಾರೆ. ವಾಲೀಬಾಲ ತರಬೇತಿದಾರರಾಗಿ ಕೇಂದ್ರಿಯ  ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ೩೧ನೇಜೂನಿಯರ ರಾಷ್ಟ್ರೀಯ ಪುರುಷ ವಾಲೀಬಾಲ ಪಂದ್ಯಾವಳಿಗೆ ಕರ್ನಾಟಕ ತಂಡದ ಮುಖ್ಯ ತರಬೇತಿದಾರರಾಗಿದ್ದರು,೨೦೦೨ ರಿಂದ ೨೦೧೦ರ ವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ವಾಲೀಬಾಲ ತಂಡಕ್ಕೆ ಮುಖ್ಯ ತರಬೇತಿದಾರರಾಗಿಕಾರ್ಯನಿರ್ವಹಿದ್ದಾರೆ. ವಾಲೀಬಾಲ್, ಹ್ಯಾಂಡಬಾಲ್ ಮತ್ತು ನೆಟಬಾಲ್ ತಂಡಗಳ ಆಯ್ಕೆ ಸಮಿತಿಯ ಸದಸ್ಯರಾಗಿಮತ್ತು ಎಸ್ ಅಟ್ಯಾಕರ ಆಗಿ ಕರ್ನಾಟಕ ವಿಶ್ವವಿದ್ಯಾಲಯ ಹಾಗು ಜೂನಿಯರ ರಾಷ್ಟ್ರೀಯ ಪುರುಷ ವಾಲೀಬಾಲತಂಡಗಳನ್ನು ಪ್ರತಿನಿದಿಸಿರುತ್ತಾರೆ. ಸನ್ ೨೦೧೦ ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಲ್ಲಿಕ್ರೀಡಾ ನಿರ್ದೇಶಕರಾಗಿ ಹಾಗು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಉಸ್ತುವಾರಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.

Name: Mr. Khalid Khan 
Phone:0836-2220024    
Mobile 9980732264
Email:kslu.Physicaldirector @gmail.com    

 

Back To Top