KSLU Logo


One moment ...
ಪ್ರಕಟಣೆ

ಧ್ಯೇಯ

ಧ್ಯೇಯ ಸಮರ್ಥ ವೃತ್ತಿಗತ ಮತ್ತು ಗುಣಮಟ್ಟದ ಸಮಾಜಮುಖಿ ಕಾನೂನು ಶಿಕ್ಷಣ ಒದಗಿಸಿಕೊಡುವ ಮೂಲಕ ಕರ್ನಾಟಕ ರಾಜ್ಯವನ್ನು ಕಾನೂನು ಅರಿವುಳ್ಳ ಸಮಾಜವನ್ನಾಗಿ ಪರಿವರ್ತಿಸುವ ಮುಖಾಂತರ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಅವನಿಗೆ ಪ್ರಮುಖ ಸಂವಿಧಾನಿಕ ಧ್ಯೇಯಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ದೊರಕಿಸಿಕೊಡುವ ಗುರಿ ಹೊಂದಲಾಗಿದೆ. ರಾಜ್ಯದ ಪ್ರತಿಯೊಂದು ಸಂಸ್ಥೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಕಾನೂನಿನ ಅರಿವನ್ನು ಮೂಡಿಸಿ ಕಾನೂನು ಮತ್ತು ನ್ಯಾಯದ ಸಂಸ್ಕøತಿಯನ್ನು ಪ್ರೋತ್ಸಾಹಿಸುವುದಾಗಿದೆ. ಇವುಗಳ ಜೊತೆ ಪ್ರತಿಯೊಬ್ಬರಲ್ಲಿ ಉತ್ತಮ ನೈತಿಕ ಮತ್ತು ಮಾನವಿಯ ಮೌಲ್ಯಗಳನ್ನು ಬೆಳೆಸುವುದಾಗಿದೆ.

ಗುರಿ

ಸ್ವ ಸ್ವಾರ್ಥಕ್ಕಿಂತ ಸೇವೆ ಮುಖ್ಯ ಎಂಬ ಧ್ಯೇಯೊದ್ದೇಶವುಳ್ಳ ಹಾಗೂ ಸಮಾಜಕ್ಕೆ ನಾಯಕತ್ವ ಮತ್ತು ಪ್ರೇರಣೆ ನೀಡುವಂತಹ ವ್ಯಕ್ತಿತ್ವವುಳ್ಳ ಕಾನೂನಿನ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ. ವೃತ್ತಿ ಪರತೆಯ ಕಾನೂನಿನ ಶಿಕ್ಷಣದಲ್ಲಿ ಉನ್ನತಿಯನ್ನು ಸಾಧಿಸುವುದು. ಕಾನೂನು ಮತ್ತು ಕಾನೂನಿನ ಸಂಸ್ಥೆಗಳು ಸಾಮಾಜಿಕವಾಗಿ ಪ್ರಸ್ತುತವಾಗುವ ದಿಶೆಯಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಪ್ರೊತ್ಸಾಹಿಸುವುದು. ಸಾಮಾನ್ಯ ವ್ಯಕ್ತಿಯ ಮನೆಯ ಬಾಗಿಲಿಗೆ ನ್ಯಾಯ ದೊರಕಿಸುವ ದಿಶೆಯಲ್ಲಿ ಬಡವರಿಗೆ ಕಾನೂನು ನೆರವು ಹಾಗೂ ಸಾಕ್ಷರತೆ ಒದಗಿಸಿಕೊಡುವದು. ಶಾಸಕಾಂಗ, ನ್ಯಾಯಾಂಗ ಹಾಗೂ ರಾಜ್ಯಾಡಳಿತ ನಡೆಸುವ ಸದಸ್ಯರಲ್ಲಿ ಕಾನೂನು ಮೂಡಿಸುವುದಾಗಿದೆ. ಅಷ್ಟೇ ಅಲ್ಲದೆ, ಕಲ್ಯಾಣ ರಾಜ್ಯದ ಕನಸನ್ನು ನನಸಾಗಿಸುವ ದೃಷ್ಟಿಯಿಂದ ಜನರಲ್ಲಿ ಕಾನೂನು ಮತ್ತು ನ್ಯಾಯಿಕ ಸಂಸ್ಥೆಗಳಲ್ಲಿ ನಂಬಿಕೆಯನ್ನು ಮೂಡಿಸುವದಾಗಿದೆ.

  ಸುದ್ದಿಗಳು ಮತ್ತು ಕಾರ್ಯಕ್ರಮಗಳು
  •  Call for papers for Student Law Review Vol. No. 5 Read more...
ದಾಖಲೆ ಸಂಗ್ರಹ
  ಪರೀಕ್ಷೆ
Back To Top